ಇಳಕಲ್ : ಸಾಧನೆಗೆ ಬಡತನ ಅಡ್ಡಿ ಆಗಲಾರದು ದೇವಾಂಗ ಸಮಾಜದ ಶ್ರೀ ಗುರು ಮುನಿಸ್ವಾಮಿಗಳು ದೇವಾಂಗ ಮಠ ಅಭಿಮತ
ಇಳಕಲ್ಲಿನ ಕೇಂದ್ರ ಶಾಲೆಯ ಮುಖ್ಯ ಗುರುಗಳಾದ ಶ್ರೀ ಶ್ರೀಧರ್ ಜೋಗಿನ್ ಇವರ ಸಹೋದರ ಶ್ರೀ ಅಶೋಕ್ ಜೋಗಿನ್ ಇವರ ಸುಪುತ್ರ ರೋಹನ್ ಜೋಗಿನ್ ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ 600 ಅಂಕಗಳಿಗೆ 372 ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿಸಿದ್ದಾರೆ ಇವರ ಈ ಪ್ರಯತ್ನ ನಮ್ಮ ಇಳಕಲ್ ನಗರಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತರುವಂತದ್ದು. ಬಡ ಕುಟುಂಬದಲ್ಲಿ ಹುಟ್ಟಿದ ಅತ್ಯುತ್ತಮ ವಿದ್ಯಾರ್ಥಿ ವಿದ್ಯೆಗೆ ಬಡತನ ಅಡ್ಡಿಯಾಗಿಲ್ಲ ಎಂಬುದಕ್ಕೆ ಸಾಕ್ಷಿ. ಇಂದು ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶೇಖರ್ ಹಿರೇಮರ್, ಎಸ್ ಎಸ್ ಪಾಟೀಲ್ ದೇವಾಂಗ ಗುರುಗಳಾದ ಈರಯ್ಯ ದೇವಾಂಗಮಠ ಸಂಸ್ಥೆಯ ಮಹಿಳಾ ಸದಸ್ಯರಾದ ಶ್ರೀಮತಿ ಮಾಲತಿ ಜೋಗಿನ್ ಮುಂತಾದವರು ಸಿಎ ಪರೀಕ್ಷೆಯಲ್ಲಿ ಸಾಧನೆ ತೋರಿದ ರೋಹನ್ ಜೋಗಿನ ಅವರಿಗೆ ಗೌರವ ಸತ್ಕಾರ ಮಾಡಲಾಯಿತು