ಮನುಷ್ಯನಿಗೆ ಆಸೆ ಇರಬೇಕು ಆದರೆ ದುರಾಸೆ ಇರಬಾರದು, ಅದು ಹೆಚ್ಚಾದಾಗ ಮನುಷ್ಯ ರಾಕ್ಷಸನಾಗುತ್ತಾನೆ , ನೆಮ್ಮದಿ ಮತ್ತು ಶಾಂತಿಯನ್ನು ಕಳೆದುಕೊಳ್ಳುತ್ತಾನೆ ಎಂದು ಇಲ್ಕಲ್ಲಿನ ಚಿತ್ರಗಿ ಶ್ರೀ ವಿಜಯ್ ಮಹಾಂತೇಶ್ವರ ಮಠದ ಶ್ರೀ ಮ.ನಿ.ಪ್ರ ಗುರು ಮಹಾಂತ ಸ್ವಾಮಿಗಳು ಹೇಳಿದರು..... ಅವರು ಇಂದು ಬನ್ನಿಹಟ್ಟಿ ಗ್ರಾಮದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆ ತಾಲೂಕು ಘಟಕ ಇಲ್ಕಲ್ ಇದ್ರು ಆಶ್ರಯದಲ್ಲಿ ನಡೆದಂತಹ ಗ್ರಾಮಗಳಲ್ಲಿ ಮಹಾಮನೆ ಹಾಗೂ ಮಹಾಂತ ಜೋಳಿಗೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.... ವ್ಯಕ್ತಿಗೆ ಅರಿವು ಇರಬೇಕು ಲಿಂಗ ಪೂಜೆಯಿಂದ ಆರಿವು ದೊರೆಯುತ್ತದೆ.., ಮಹಿಳೆಯರಿಗೂ ಲಿಂಗ ದೀಕ್ಷೆಯನ್ನು ನೀಡಿದ ಬಸವಣ್ಣನವರು 12ನೇ ಶತಮಾನದಿಂದಲೇ ಈ ಒಂದು ಜಾಗೃತಿಯನ್ನು ಮೂಡಿಸಿದರು ಎಂದು ಅವರು ಹೇಳಿದರು.. ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಮಾತನಾಡಿದ ಶ್ರೀ ವಿಜಯ ಮಹಾಂತೇಶ ಪದವಿ ಪೂರ್ವ ಕಾಲೇಜು ಇಲಕಲ್ನ ಉಪನ್ಯಾಸಕ ಶ್ರೀ ರವಿ ಯಮನಪ್ಪ ವಾಲಿಕಾರ್ ನಾವು ಉತ್ತಮ ಸಂಸ್ಕಾರ ಹೊಂದಿ ಮೌಲ್ಯಯುತ ಬಾಳನ್ನು ಬಾಳಬೇಕು ಎಂದರು.. ಉತ್ತಮ ಆರೋಗ್ಯಕ್ಕಾಗಿ ಜೀವನ ಶೈಲಿ ಎಂಬ ವಿಷಯದ ಮೇಲೆ ಮಾತನಾಡಿದ ಖ್ಯಾತ ಹೃದಯ ತಜ್ಞ ವೈದ್ಯ ಡಾ. ಮಹಾಂತೇಶ್ ಕಡಪಟ್ಟಿ ಮಾತನಾಡುತ್ತ ನಾವು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು , ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು , ಜನರೊಂದಿಗೆ ಬೆರೆಯಬೇಕು ಧ್ಯಾನ ಆಟ ಯೋಗ ಇಂಥವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು , ಬೆಸನವನ್ನು ಮಾಡಿದ ದೇಹ ಮಸಣವನ್ನು ಕಾಣುವುದು. ಎಂದು ಹೇಳಿದರಲ್ಲವೇ ಪ್ರೊಜೆಕ್ಟರ್ ಮೂಲಕ ತಂಬಾಕು ಸೇವನೆ ಮಧ್ಯಪಾನ ಇಂತಹ ದುಶ್ಚಟಗಳಿಂದ ಬರುವಂತ ರೋಗಗಳ ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು..,.. ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾದಂತಹ ಮಂಜುನಾಥ್ ಬೆಳವಣಿಕಿ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಸವಿತಾ ಗೋಂಗಟಶೆಟ್ಟಿ ಕಾರ್ಯದರ್ಶಿ ಮಂಜುಳಾ ತೋಟಿಗೆರ, ಗ್ರಾಮದ ಹಿರಿಯರಾದ ವೇದಮೂರ್ತಿ ಅಯ್ಯಪ್ಪ ಸಾರಂಗಮಠ ವೇದಿಕೆಯಲ್ಲಿದ್ದರು,
ಗ್ರಾಮದ ಅನೇಕ ಯುವಕರು ತಮ್ಮ ದುಶ್ಚಟಗಳನ್ನು ಶ್ರೀಗಳ ಜೋಳಿಗೆಗೆ ಹಾಕಿದರು , ಶ್ರೀಗಳು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ತಮ್ಮ ದುಶ್ಚಟಗಳನ್ನು ಜೋಳಿಗೆಗೆ ಹಾಕುವಂತೆ ಮನವಿ ಮಾಡಿಕೊಂಡರು... ಆರಂಭದಲ್ಲಿ ಶ್ರೀಗಳನ್ನು ಗ್ರಾಮದ ಮುತ್ತೈದೆಯರು ಆರತಿ ಬೆಳಗುವ ಮೂಲಕ ಸ್ವಾಗತ ಮಾಡಿಕೊಂಡರು ಇಲ್ಕಲ್ಲಿನ ಬಸವ ಕೇಂದ್ರ ವಿಜಯ ಮಹಾಂತೇಶ ಕರಣ ಸಂಘ ಅಕ್ಕನ ಬಳಗ ಶರಣ ಸಾಹಿತ್ಯ ಪರಿಷತ್ತು ಕದಳಿ ವೇದಿಕೆ ವಿಜಯ ಮಹಂತ ಕಲಾಲೋಕ ವೀರರಾಣಿ ಚೆನ್ನಮ್ಮ ಮಹಿಳಾ ಸಂಘ ನೀಲಾಂಬಿಕ ಬಳಗ ಹಾಗೂ ಜೆಸಿ ಇಳಕಲ್ ಸಿಲ್ಕ್ ಸಿಟಿಯ ಅಧ್ಯಕ್ಷರು, ಸದಸ್ಯರು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು