ಇಳಕಲ್ :- ನಾಳೆ ಇಳಕಲ್ ನಗರದಲ್ಲಿ ಬೃಹತ್ ಪ್ರತಿಭಟನೆ

 


ಇಳಕಲ್ :- ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮೇಲೆ ಶೂ ಎಸೆದ ಘಟನೆ ಖಂಡಿಸಿ – ಅಕ್ಟೋಬರ್ 17ರಂದು ಇಲಕಲ್ಲದಲ್ಲಿ ಬೃಹತ್ ಪ್ರತಿಭಟನೆ

ಇಲಕಲ್ಲ, ಅ.16: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯನ್ನು ಖಂಡಿಸಿ ಅಕ್ಟೋಬರ್ 17ರಂದು ಇಲಕಲ್ಲ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ದಲಿತ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದು, ಸಂಘಟನೆಯ ಅಧ್ಯಕ್ಷ ಶರಣಪ್ಪ ಆಮದಿಹಾಳ ನೇತೃತ್ವ ವಹಿಸಲಿದ್ದಾರೆ. ಹಾಗೆ ನಗರದ ವಿವಿಧ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿಭಟನಾ ಮೆರವಣಿಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಎಸ್.ಆರ್. ಕಂಠಿ ಸರ್ಕಲ್ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಸಾಗುತ್ತದೆ. ನಂತರ ಮೆರವಣಿಗೆ ಮರಳಿ ಎಸ್.ಆರ್. ಕಂಠಿ ವೃತ್ತಕ್ಕೆ ತಲುಪಲಿದ್ದು, ಬಳಿಕ ಮಾನ್ಯ ತಹಸಿಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುತ್ತದೆ.ಈ ಕೃತ್ಯವನ್ನು “ಪ್ರಜಾಪ್ರಭುತ್ವಕ್ಕೆ ಅವಮಾನ” ಎಂದು ಶರಣಪ್ಪ ಆಮದಿಹಾಳ ಖಂಡಿಸಿ, ಆರೋಪಿಯಾಗಿರುವ ರಾಕೇಶ್ ಕಿಶೋರ್ ವಿರುದ್ಧ ದೇಶದ್ರೋಹ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು. ತಾಲ್ಲೂಕಿನ ಎಲ್ಲಾ ದಲಿತರು ಮತ್ತು ಪ್ರಗತಿಪರ ಚಿಂತಕರು ಮಧ್ಯಾಹ್ನ 3 ಗಂಟೆಗೆ ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅವರು ಕರೆ ನೀಡಿದರು.



Post a Comment

Previous Post Next Post

Contact Form