ಇಳಕಲ್ : ನಗರದ ಜೆಸಿಐ ಇಳಕಲ್ ಮಹಾಂತಶ್ರೀ ಸಿಟಿ ವಲಯ 24 ಘಟಕದ 2026ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.16 ಶುಕ್ರವಾರ ಸಂಜೆ 6 ಗಂಟೆಗೆ ನಗರದ ಜೋಶಿಗಲ್ಲಿಯ ಹೊಸಮನಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಪೂಜ್ಯ ಗುರುಮಹಾಂತ ಮಹಾಸ್ವಾಮೀಜಿಗಳು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇಳಕಲ್ ನಗರ ಠಾಣೆಯ ಪಿ.ಎಸ್.ಐ ಮಂಜುನಾಥ ಪಾಟೀಲ, ಜೆಸಿಐ ಇಂಡಿಯಾ 24ರ ವಲಯ ಅಧ್ಯಕ್ಷ ಜೆಎಫ್‌ಡಿ ಸಿ.ಎ. ಮಧುಸೂದನ್ ನಾವಡ ಆಗಮಿಸಲಿದ್ದಾರೆ. ಗೌರವ ಅತಿಥಿಯಾಗಿ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಚಿನ್ನದ ಪದಕ ಪುರಸ್ಕೃತೆ ಮೋನಲ್ ಭಂಡಾರಿ ಹಾಗೂ ವಲಯ ಉಪಾಧ್ಯಕ್ಷ ಅಮೃತ ಸಿ. ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು 2025ನೇ ಸಾಲಿನ ಅಧ್ಯಕ್ಷ ನಿಕಟಪೂರ್ವ ಅಧ್ಯಕ್ಷ ಹನುಮಂತ ಚುಂಚಾ ವಹಿಸಲಿದ್ದು, 2026ನೇ ಸಾಲಿನ ನಿಯೋಜಿತ ಅಧ್ಯಕ್ಷ ಉಸ್ತಾದಖಾನ ಇಲಾಳ, ಕಾರ್ಯದರ್ಶಿ ಬಸವರಾಜ ಕಾಳಗಿ, ಖಜಾಂಚಿ ಮಹಾಂತೇಶ ಗೊಂಗಡಶೆಟ್ಟಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಚಂದ್ರು ಮುಧೋಳ ಪದಗ್ರಹಣ ಮಾಡಲಿದ್ದಾರೆ.
ಕಾರ್ಯಕ್ರಮ ನಿರ್ದೆಶಕ ರಾಘವೇಂದ್ರ ಶಾವಿ ಹಾಗೂ ಸರ್ವ ಸದಸ್ಯರು ಸರ್ವರಿಗೂ ಸಮಾರಂಭಕ್ಕೆ ಸ್ವಾಗತವನ್ನು ಕೋರಿದ್ದಾರೆ



