ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಜಯಭೇರಿ, ಕೇವಲ 2 ರನ್ಗಳಿಂದ ಆರ್‌ಸಿಬಿ ತಂಡ ಗೆಲುವು ಸಾಧಿಸಿದೆ ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ 16 ಅಂಕಗಳಿಂದ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದರು. ಚೆನ್ನೈ ತಂಡ ಫೀಲ್ಡಿಂಗ್ ಮಾಡಿತು. ಆರ್‌ಸಿಬಿ ಪರವಾಗಿ ಓಪನರ್ಗಳಾಗಿ ವಿರಾಟ್ ಕೊಹ್ಲಿ ಹಾಗೂ ಯಂಗ್ ಬ್ಯಾಟರ್ ಜಾಕೋಬ್ ಬೆಥೆಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪಂದ್ಯದಲ್ಲಿ 28 ಬಾಲ್ ಆಡಿದ ಬೆಥೆಲ್ 08 ಅದ್ಭುತವಾದ ಬೌಂಡರಿಗಳು ಹಾಗೂ 02 ಸಿಕ್ಸರ್ನಿಂದ 53 ರನ್ ಬಾರಿಸಿದರು. 55 ರನ್ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದಾಗ ಬ್ರೆವಿಸ್ಗೆ ಕ್ಯಾಚ್ ಕೊಟ್ಟು ಹೊರ ನಡೆದರು.
ಆರ್ ಸಿ ಬಿ ಆಪತ್ಬಾಂಧವ ಕೊಹ್ಲಿ ಕೂಡ ಉತ್ತಮ ಬ್ಯಾಟಿಂಗ್ ಮಾಡಿ, ಕೇವಲ 29 ಎಸೆತಗಳಲ್ಲಿ 3 ಬೌಂಡರಿ, 05 ಸಿಕ್ಸರ್ಗಳಿಂದ ಅರ್ಧಶತಕ ಸಿಡಿಸಿದರು. 05 ಬೌಂಡರಿ, 05 ಸಿಕ್ಸರ್ಗಳಿಂದ 62 ರನ್ ಗಳಿಸಿ ಸ್ಯಾಮ್ ಕರನ್ ಬೌಲಿಂಗ್ನಲ್ಲಿ ಔಟ್ ಆದರು. ಉಳಿದಂತೆ ದೇವದತ್ ಪಡಿಕ್ಕಲ್ 17, ರಜತ್ ಪಾಟಿದಾರ್ 11, ಜಿತೇಶ್ ಶರ್ಮಾ 11 ರನ್ಗೆ ಔಟ್ ಆದರು. ಪಂದ್ಯದ ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರೊಮಾರಿಯೋ ಶೆಫರ್ಡ್ ಕೇವಲ 14 ಬಾಲ್ಗಳನ್ನು ಎದುರಿಸಿ 04 ಬೌಂಡರಿ ಹಾಗೂ 06 ಸಿಕ್ಸರ್ಗಳಿಂದ 53 ರನ್ ಚಚ್ಚಿದರು. ಇದರಿಂದ ಆರ್‌ಸಿಬಿ 20 ಓವರ್ಗಳಲ್ಲಿ 05 ವಿಕೆಟ್ಗೆ 214 ರನ್ಗಳ ಬೃಹತ್ ಗುರಿ ನೀಡಿತ್ತು.
ಈ ದೊಡ್ಡ ಗುರಿ ಹಿಂದೆ ಬಿದ್ದ ಚೆನ್ನೈ ಆಟಗಾರರು ಆರಂಭದಲ್ಲಿ ಕೊಂಚ ಸಮಸ್ಯೆ ಎದುರಿಸಿದರು. ಓಪನರ್ ಶೇಕ್ ರಶೀದ್ 14 ರನ್ಗೆ ಪೆವಿಲಿಯನ್ ಸೇರಿದರು. ಇವರ ಬಳಿಕ ಕ್ರೀಸ್ಗೆ ಬಂದಿದ್ದ ಸ್ಯಾಮ್ ಕರನ್ 05ಕ್ಕೆ ವಿಕೆಟ್ ಕೀಪರ್ಗೆ ಬಲಿಯಾದರು. ಆದರೆ ಇನ್ನೊಂದೆಡೆ ಓಪನರ್ ಆಯುಷ್ ಮಾತ್ರೆ ಮಾತ್ರ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಆಯುಷ್ ಕೇವಲ 48 ಎಸೆತಗಳಲ್ಲಿ 09 ಬೌಂಡರಿ ಹಾಗೂ 05 ದೊಡ್ಡ ಸಿಕ್ಸರ್ಗಳಿಂದ 94 ರನ್ ಗಳಿಸಿ ಸಂಚುರಿ ಮಿಸ್ ಮಾಡಿಕೊಂಡರು ಸೆಂಚುರಿಗೆ ಇನ್ನು ಕೇವಲ 6 ರನ್ಗಳು ಬೇಕಿದ್ದಾಗ ಲುಂಗಿ ಎನ್‌ಗಿಡಿ ಬೌಲಿಂಗ್ನಲ್ಲಿ ಕೃನಾಲ್ಗೆ ಕ್ಯಾಚ್ ಕೊಟ್ಟು ಬೇಸರದಿಂದ ಹೆಜ್ಜೆ ಹಾಕಿದರು.ಆರ್‌ಸಿಬಿ ವಿರುದ್ಧ ಘರ್ಜನೆ ಮಾಡಿದ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೊನೆವರೆಗೂ ತಂಡಕ್ಕಾಗಿ ಹೋರಾಟ ಮಾಡಿದರು. 45 ಎಸೆತಗಳನ್ನು ಎದುರಿಸಿದ ಜಡೇಜಾ 08 ಬೌಂಡರಿ 02 ಸಿಕ್ಸರ್ಗಳಿಂದ 77 ಗಳಿಸಿ ಅಜೇಯರಾಗಿ ಉಳಿದರು. ಕೊನೆಯಲ್ಲಿ ಜಡೇಜಾ ಜೊತೆ ಬ್ಯಾಟಿಂಗ್ ಆರಂಭಿಸಿದ್ದ ಶಿವಂ ದುಬೆ 08 ರನ್ ಗಳಿಸಿ ಆಡಿ ತಂಡವನ್ನು ಗೆಲ್ಲಿಸುವಲ್ಲಿ ಕೈಚೆಲ್ಲಿದರು. ಇದರಿಂದ ರಣರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ ಅತ್ಯದ್ಭುತವಾದ ಗೆಲುವು ಪಡೆಯಿತು. ಕೊನೆಗೆ ಚೆನ್ನೈ 20 ಓವರ್ಗಳಲ್ಲಿ 05 ವಿಕೆಟ್ಗೆ 211 ರನ್ ಮಾತ್ರ ಗಳಿಸಿ ಸೋಲು ಒಪ್ಪಿತು.