ಇಳಕಲ್ :ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ದ್ಯಾಮಮ್ಮದೇವಿ ಹಾಗೂ ಹುಡೇದ ಲಕ್ಷ್ಮಿ ದೇವರ ಪ್ರಾಣ ಪ್ರತಿಷ್ಠಾಪನೆಯನ್ನು ನಂದವಾಡಗಿಯ ಪೂಜ್ಯರಾದ ಡಾ. ಚನ್ನಬಸವ ಶಿವಾಚಾರ್ಯರು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಂದಂತಹ ಭಕ್ತಾದಿಗಳಿಗೆ ಆಶೀರ್ವಚನವನ್ನು ನೀಡುವುದರ ಜೊತೆಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ತೊಂಡಿಹಾಳ ಗ್ರಾಮದ ಗುರು ಹಿರಿಯರು ಹಾಗೂ ಕಮಿಟಿಯವರು ಪೂಜ್ಯರಿಗೆ ಸತ್ಕರಿಸಿದರು.