ಇಳಕಲ್ : ತಾಲೂಕಿನ ಸಿದ್ದನಕೊಳ್ಳದ ದಾಸೋಹ ಮಠದಿಂದ ಕೆಲೂರ ಕ್ರಾಸ್ ವರೆಗೆ ರಸ್ತೆ ಮರುಡಾಂಬರೀಕರಣಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುಕ್ಷೇತ್ರ ಸಿದ್ದನ ಕೊಳದ ಶ್ರೀಮಠದ ಹತ್ತಿರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಪೂಜ್ಯರಾದ ಡಾ. ಶಿವಕುಮಾರ್ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀಮಠದ ಸದ್ಭಕ್ತರಾದ ಸಂಗಮೇಶ್, ಭೀಮನಗೌಡ ಬರಗೂರು, ಚಂದ್ರಶೇಖರ್ ಕುಂಬಾರ್, ಮಹಾಲಿಂಗಗೌಡ ಹಳೆಗೌಡ್ರ್, ಶರಣಗೌಡ ಕಂದಕೂರ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.