ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಳೆರಾಜೇಂದ್ರಮಠ ಮುರನಾಳದ ಪೂಜ್ಯ ಶ್ರೀ ನಿತ್ಯಾನಂದ ಸ್ವಾಮಿಗಳು,ಪೂಜ್ಯ ಶ್ರೀ ಗುರುನಾಥ ಮಹಾಸ್ವಾಮಿಗಳು ಹಾಗೂ ಬ್ರಹ್ಮಾನಂದ ಭೇರಿ ಮಠದ ವಿಶ್ವನಾಥ ಮಹಾಸ್ವಾಮಿಗಳು, ಬಸವಂತಾಚಾರ್ಯ ಗುರುವಿನ ವಹಿಸಿದ್ದರು.
ಅಮ್ಮಾ ಸೇವಾ ಸಂಸ್ಥೆಯ ಸಂಸ್ಥಾಪಕ ಸದಸ್ಯ ಗುರುದಾಸ ನಾಗಲೋಟಿ,ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ರಾಮಣ್ಣ ಮರೋಳ, ವೀರಭದ್ರಪ್ಪ ಹಿಪ್ಪರಗಿ ಅತಿಥಿಗಳಾಗಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಡಾ.ವಿಶ್ವನಾಥ ವಂಶಾಕೃತಮಠ ಹಾಗೂ ನಿವೃತ್ತ ಪ್ರಾಚಾರ್ಯ ಡಾ.ಶಂಕರ ಕಂದಗಲ್ಲ ಅವರಿಗೆ ಆಧ್ಯಾತ್ಮಿಕ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನನಿಸಲಾಯಿತು.
ಚಿನ್ನಪ್ಪ ಸೂಳಿಭಾವಿ, ಗಂಗಾಧರ ನಾಲತವಾಡ, ವಿಶ್ವಕರ್ಮ ನಾಲತವಾಡ, ಸುವರ್ಣಬಾಯಿ ನಾಲತವಾಡ,ಶಿಲ್ಪಾ ನಾಲತವಾಡ, ವೈಶಾಲಿ ನಾಲತವಾಡ,ಲಕ್ಷ್ಮೀ ನಾಲತವಾಡ, ಮುರಳಿಧರ ನಾಲತವಾಡ, ಶಶಿಧರ ನಾಲತವಾಡ, ವಿಶ್ವಕರ್ಮ ಸಮಾಜದ ಹಿರಿಯರು,ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಹಿತ್ಯ ಬುತ್ತಿ ಹೊತ್ತು ತಂದ ಕುಮಾರಿ ಶ್ರೀರಕ್ಷಾ ನಾಲತವಾಡ ಎಲ್ಲರ ಗಮನ ಸೆಳೆದಳು, ಜಗನ್ನಾತ ಮರೋಳ ತಮ್ಮ ಸ್ವರಚಿತ ಪ್ರಾರ್ಥನೆಯನ್ನ ಹಾಡಿದರು. ಮೌನೇಶ ನಾಲತವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುನಾಥ ಮರೋಳ ಪರಿಚಯಿಸಿದರು, ಮೌನೇಶ ಪತ್ತಾರ (ತಾವರಗೇರಿ) ನಿರೂಪಿಸಿದರು.