Bagalkot : ಬಾಗಲಕೋಟೆಯ ನೂತನ ಜಿಲ್ಲಾಧಿಕಾರಿಯಾಗಿರುವ ಶ್ರೀ ಸಂಗಪ್ಪ ಎಂ. ಅವರಿಗೆ ಜಾನಕಿ ಕೆ.ಎಂ ಅವರು ಬುಧವಾರ ಪುಷ್ಪ ನೀಡಿ ಸ್ವಾಗತಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು

 


ಬಾಗಲಕೋಟೆ : ನೂತನ ಜಿಲ್ಲಾಧಿಕಾರಿಯಾಗಿ ಸಂಗಪ್ಪ ಅವರು ಬುಧವಾರ ಅಧಿಕಾರವನ್ನು ವಹಿಸಿಕೊಂಡರು.


ಜಿಲ್ಲಾಧಿಕಾರಿಯಾಗಿದ್ದ ಜಾನಕಿ ಕೆ.ಎಂ ಅವರಿಂದ ಅಧಿಕಾರವನ್ನು ವಹಿಸಿಕೊಂಡಿದ್ದು, ಜಾನಕಿ ಕೆ.ಎಂ ಅವರು ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿ ವರ್ಗಾವಣೆಯಾಗಿದ್ದಾರೆ.



ಕಳೆದ ಎರಡು ವರ್ಷಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ನೀವು ತೋರಿಸಿದ ಪ್ರೀತಿ, ವಿಶ್ವಾಸಕ್ಕೆ ನಾನು ಕೃತಜ್ಞತಳಾಗಿದ್ದೇನೆ. ಬಾಗಲಕೋಟೆ ಜಿಲ್ಲೆಗೆ ನನ್ನ ಹೃದಯದಲ್ಲಿ ಶಾಶ್ವತ ಸ್ಥಾನವಿದ್ದು, ಜಿಲ್ಲೆಯು ಎಲ್ಲ ರಂಗಗಳಲ್ಲಿಯು ಮತ್ತಷ್ಟು ಪ್ರಗತಿ ಸಾಧಿಸುವಂತಾಗಲಿ ಎಂದು ಆಶಿಸುತ್ತೇನೆ ಎಂದು ಬಾಗಲಕೋಟ ಜಿಲ್ಲೆಯ ಜನತೆಗೆ ಕೃತಜ್ಞತಾ ತಿಳಿಸಿದ್ದಾರೆ

Post a Comment

Previous Post Next Post

Contact Form