ಇಲಕಲ್ಲ : ವಿಜಯ ಮಹಾಂತೇಶ್ ಮಹಿಳಾ ಕಾಲೇಜಗೆ ಪ್ರಾಂಶುಪಾಲರಾಗಿ ನೇಮಗೊಂಡ ಎಂ ಎ ಬಾಗವಾನ ಗುರುಗಳನ್ನು ಸತ್ಕರಿಸಿದ ಕಂದಗಲ್ ಗ್ರಾಮದ ಮುಖಂಡರು
ಕಂದಗಲ್: ಗ್ರಾಮದ ಎಂ ಎ ಬಾಗವಾನ ಗುರುಗಳು ಇಲಕಲ್ಲನ ವಿಜಯ ಮಹಾಂತೇಶ ಮಹಿಳಾ ಕಾಲೇಜನಲ್ಲಿ ಇಲ್ಲಿವರೆಗೆ ಪ್ರೊಪೆಸರ ಆಗಿ ಉತ್ತಮ ಸೇವೆ ಸಲ್ಲಿಸಿ ಈಗ ಅದೇ ಕಾಲೇಜಿಗೆ ಪ್ರಾಂಶುಪಾಲರಾಗಿ ನೇಮಕಗೊಂಡು ನಮ್ಮ ಕಂದಗಲ್ಲ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿ ಗ್ರಾಮದ ಹೆಮ್ಮೆಯ ಪುತ್ರನಾಗಿ ಹೊರಹೋಮ್ಮಿರುವದು ಬಹಳ ಸಂತಸ ತಂದಿದ್ದು ಇವರಿಂದ ಇನ್ನು ಹೆಚ್ಚಿನ ರೀತಿಯಲ್ಲಿ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮ ಮತ್ತು ನಗರಗಳ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಇವರ ಮಾರ್ಗದರ್ಶನ ಸದಾ ದೊರೆಯುತ್ತಿರಲಿ, ಶಿಕ್ಷಣಕ್ಕೆ ಇವರ ಕೊಡುಗೆ ಅಪಾರವಾಗಿದ್ದು ನಿಷ್ಠೆ ಪ್ರಾಮಾಣಿಕತೆ ಸೌಹಾರ್ದ ಜೀವನ್ ಇವರನ್ನು ಈ ಮಟ್ಟಕ್ಕೆ ತಲುಪಿಸಿದೆ ಎಂದು ಗ್ರಾಮದ ಪ್ರಗತಿಪರ ರೈತರು ಧಣಿಗಳಾದ ಚನ್ನಪ್ಪಗೌಡ್ರ ನಾಡಗೌಡ್ರ ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದಸಾಬ್ ಭಾವಿಕಟ್ಟಿ ಮಾಜಿ ತಾ ಪo ಪಂಚಾಯತ್ ಅಧ್ಯಕ್ಷ ಮಹಾಂತೇಶ್ ಕಡಿವಾಲ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚನ್ನಪ್ಪ ಜಾಲಿಹಾಳ ಸಮಾರಂಭದಲ್ಲಿ ಮು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಪ್ರಾಂಶುಪಾಲರಾದ ಎಂ ಎ ಬಾಗವಾನ ಗುರುಗಳು ಮಾತನಾಡಿ ಕಂದಗಲ್ಲ ಗ್ರಾಮದಲ್ಲಿ ಹುಟ್ಟಿದ್ದು ನನ್ನ ಪುಣ್ಯ ಭವ್ಯವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದಲ್ಲಿ ಉನ್ನತ ಮಟ್ಟದ ಉದ್ದೆಗಳನ್ನು ನಮ್ಮ ಕಂದಗಲ್ಲ ಗ್ರಾಮದವರು ಅಲಂಕರಿಸಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್ ಅಳ್ಳೊಳ್ಳಿ, ಇಲಕಲ್ಲ ನಗರದ ಪತ್ರಕರ್ತ ಮುರ್ತುಜಾ ಕಂದಗಲ್ಲ, ಮಲ್ಲಪ್ಪ ಪೋತನಾಳ, ಅಮರಪ್ಪ ಹಡಪದ, ಅಮರೇಶ ಕೊಡಕೇರಿ , ಅಮಾತೆಪ್ಪ ಯರದಾಳ.ಪ್ರಶಾಂತ ಬನ್ನಿಗೋಳ, ರವಿಕುಮಾರ ಗಾಣಿಗೇರ, ಹಾಜಿಸಾಬ ಬಾಗವಾನ, ಉಪಸ್ಥಿತರಿದ್ದರು.
ಸಂಗಣ್ಣ ಹವಾಲ್ದಾರ ಸ್ವಾಗತಿಸಿ ಕಾರ್ಯಕ್ರಮ ನಿರೋಪಿಸಿದರು. ಪತ್ರಕರ್ತ ವೀರೇಶ ಶಿಂಪಿ ವಂದಿಸಿದರು.