ಇಳಕಲ್: ನಗರದ ಸ್ನೇಹರಂಗ ಭವನದಲ್ಲಿ ಜುಲೈ ೨೮ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಳಕಲ್ ತಾಲೂಕ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ, ಪತ್ರಕರ್ತರ ಮಕ್ಕಳು ಎಸ್. ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಿಕಾ ವಿತರಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಇದೆ ಎಂದು ಸಂಘದ ಕಾರ್ಯದರ್ಶಿ ಬೀಮಣ್ಣ ಗಾಣಿಗೇರ ತಿಳಿಸಿದ್ದಾರೆ.ಪೂಜ್ಯ ಗುರುಮಹಾಂತ ಸ್ವಾಮಿಗಳು, ಫೈಸಲ್ ಪಾಷಾ ಹಾಗೂ ಸಿದ್ಧನಕೊಳ್ಳದ ಡಾ ಶಿವಕುಮಾರ ಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಸಂಘದ ಅಧ್ಯಕ್ಷ ವಿನೋದ ಎಸ್. ಬಾರಿಗಿಡದ ಅಧ್ಯಕ್ಷತೆ ವಹಿಸುವರು. ವಿಜಯಮಹಾಂತೇಶ ಗದ್ದನಕೇರಿ ಅವರಿಂದ ಉಪನ್ಯಾಸವಿದೆ.
ಕಾ.ನಿ.ಪ. ರಾಜ್ಯ ಸಮಿತಿ ಸದಸ್ಯ ಮಹೇಶ ಅಂಗಡಿ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಆನಂದ ದಲಭಂಜನ, ಕಾರ್ಯದರ್ಶಿ ಶಂಕರ ಕಲ್ಯಾಣಿ, ಹುನಗುಂದ ಅಧ್ಯಕ್ಷ ಅಮರೇಶ ನಾಗೂರ, ತಹಶೀಲ್ದಾರ ಅಮರೇಶ ಪಮ್ಮಾರ,ಹುನಗುಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಇಳಕಲ್ ತಾಲೂಕಾ ಕಾರ್ಯ ನಿರ್ವಾಹಕಾಧಿಕಾರಿ ಸೋಮಲಿಂಗಪ್ಪ ಅಂಟರತಾಣಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಗರಸಭೆಯ ಅಧ್ಯಕ್ಷೆ ಸುಧಾರಾಣಿ ಸಂಗಮ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಪೌರಾಯುಕ್ತ ಶ್ರೀನಿವಾಸ ಜಾಧವ, ಹುನಗುಂದ್-ಇಳಕಲ್ ಸಿಪಿಐ ಸುನಿಲ್ ಸವದಿ, ಶಹರ ಪಿಎಸ್‌ಐ ಶಹಜಹಾನ ನಾಯಕ, ಗ್ರಾಮೀಣ ಪಿಎಸ್‌ಐ ಮಲ್ಲಿಕಾರ್ಜುನ ಸತ್ತಿಗೌಡ ಅವರು ಸಹ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಕರ್ನಾಟಕ ಕಾರ್ಯನಿರತ ಸಂಘದ ಪದಾಧಿಕಾರಿಗಳು, ಸದಸ್ಯರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

