ಇಲಕಲ್ಲ - ಕುಲಕರ್ಣಿ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-01 ರಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಮಕ್ಕಳಿಗಾಗಿ ಅಗ್ನಿ ಅನಾಹುತಗಳು ಮುಂಜಾಗ್ರತೆ ಕ್ರಮ ಮತ್ತು ಅಣಕು ಪ್ರದರ್ಶನ ತೋರಿಸಿದರು.
ಅಣುಕು ಪ್ರದರ್ಶನ ಉದ್ದೇಶಿಸಿ ಅಗ್ನಿಶಾಮಕ ಇಲಾಖೆಯ ಜಗದೀಶ,ಗಿರಡ್ಡಿ. ಮಾತನಾಡಿ ಮನೆಯಲ್ಲಿ ಅನಿಲ ಸೋರಿಕೆಯಾದಾಗ ಮತ್ತು ಗ್ಯಾಸ್ ಸಿಲೆಂಡರ್ ಬೆಂಕಿ ಬಿದ್ದಾಗ ಅನುಸರಿಸಬೇಕಾದ ಕ್ರಮಗಳು ಮತ್ತು ಪಾಲಿಸಬೇಕಾದ ನಿಯಮಗಳು ಕೈಗೊಳ್ಳಬೇಕಾದ ಕೆಲಸ ಕಾರ್ಯಗಳು ಯಾವುವು ಮತ್ತು ಮನೆಯಲ್ಲಿ ಅನಿಲ ಲೀಕ್ ಆದಾಗ ಮನೆ ಒಳಗೆ ಪ್ರವೇಶ ಮಾಡುವ ಕ್ರಮ ಮತ್ತು ಮನೆಯ ಪ್ರವೇಶ ಮಾಡುವುದಕ್ಕಿಂತ ಮುಂಚೆ ಅನುಸರಿಸಬೇಕಾದ ನಿಯಮಗಳನ್ನು ಪ್ರಯೋಗದ ಮೂಲಕ ಮಾಡಿ ತೋರಿಸಿದರು. ಮತ್ತು ಸಿಲೆಂಡರ್ ಅಂಗಡಿಯಿಂದ ಸಿಲಿಂಡರ್ ತೆಗೆದುಕೊಳ್ಳುವಾಗ ಪರಿಶೀಲಸಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಸಿಲೆಂಡರ್ ಕಡ್ಡಾಯವಾಗಿ ದಿನಾಂಕ ಪರಿಶೀಲನೆ ಮಾಡಿ ಪ್ರತಿಯೊಬ್ಬರ ತೆಗೆದುಕೊಳ್ಳಬೇಕು ಇದರಿಂದ ಅಚಾನಕಾಗಿ ಆಗಬೇಕಾದ ದೊಡ್ಡ ಅನಾಹುತ ತಪ್ಪಿಸಿದಂತಾಗುತ್ತದೆ ಎಂದು ಹೇಳಿದರು.ನಂತರ ಶಾಲೆಯ ಪರವಾಗಿ ಶಿಕ್ಷಕ ರಂಗನಾಥ ಮಾಸರಡ್ಡಿ ಮಾತನಾಡಿ ಅಡಿಗೆ ಅನಿಲದ ಬೆಂಕಿಯ ಬಗ್ಗೆ ಮಾಹಿತಿ ತಿಳಿಸಿದ್ದು ಮಕ್ಕಳ ಭವಿಷ್ಯದಲ್ಲಿ ತುಂಬಾ ಉಪಯುಕ್ತವಾಗಲಿದ್ದು ಮಕ್ಕಳ ಜೊತೆಗೆ ಅಡುಗೆ ಅನಿಲದ ಬಗ್ಗೆ ನಮಗೆ ಗೊತ್ತಿರದ ಅನೇಕ ಮಾಹಿತಿಗಳನ್ನು ತಿಳಿಸಿಕೊಟ್ಟ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಸಿಬ್ಬಂದಿಯವರಿಗೆ ಯವರಿಗೆ ಧನ್ಯವಾದಗಳು ಹೇಳಿದರು.