ಇಳಕಲ್ : ಇಲ್ಲಿನ ಸುವರ್ಣ ರಂಗಮಂದಿರದಲ್ಲಿ ಗುಳೇದಗುಡ್ಡದ ಸಂಗಮೇಶ್ವರ ನಾಟಕ ಸಂಘ ಪ್ರದರ್ಶನ ಮಾಡುತ್ತಿರುವ ಚಂದುಳ್ಳಿ ಚೆಲುವೆ ನಾಟಕಕ್ಕೆ ಮಂಜು ಗುಳೇದಗುಡ್ಡ ಅಭಿನಯವೇ ಜೀವಾಳವಾಗಿದೆ.
ಅಣ್ಣ ತಮ್ಮಂದಿರ ಸರಳ ಕತೆಯನ್ನು ಯಾವುದೇ ಗೋಜಲು ಗೊಂದಲವಿಲ್ಲದೇ ನಿರೂಪಿಸಿರುವ ನಿರ್ದೇಶಕರು ಒಂದು ಮನೆಯಲ್ಲಿ ಇಬ್ಬರು ಮಹಿಳೆಯರ ನಡುವೆ ನಡೆಯುವ ತಾಕಲಾಟವನ್ನು ರಂಜನೀಯವಾಗಿ ನೀಡಿದ್ದಾರೆ.
ಇತ್ತೀಚಿನ ಬಹುತೇಕ ನಾಟಕಗಳಿಗೆ ಹಾಸ್ಯ ಪಾತ್ರಧಾರಿಗಳಿಗೆ ಪ್ರಮುಖ ಪಾತ್ರಧಾರಿಗಳಿಗೆ ಸಂಬಂಧ ಇಲ್ಲದಂತೆ ಇರುವಾಗ ಮೂಲ ಕತೆಯೊಂದಿಗೆ ಹಾಸ್ಯ ಪಾತ್ರಗಳು ಸೇರಿಕೊಂಡು ಪ್ರೇಕ್ಷಕರಿಗೆ ಹಾಸ್ಯದ ರಸದೂಟವನ್ನು ನೀಡುತ್ತವೆ ಅದರಲ್ಲೂ ಅನುಕೂಲ ಪಾತ್ರಧಾರಿ ಮಂಜು ಗುಳೇದಗುಡ್ಡರ ಎರಡು ಸನ್ನಿವೇಶಗಳು ಪ್ರೇಕ್ಷಕರಿಗೆ ನಕ್ಕು ನಲಿಯುವಂತೆ ಮಾಡುತ್ತವೆ ಹೊಲಕ್ಕೆ ನೀರು ಹಾಯಿಸುವ ಸನ್ನಿವೇಶದಲ್ಲಿ ನಾಯಕಿ ಜೊತೆಗೆ ಅನುಕೂಲ ನಡೆಸುವ ಮಾತುಗಳು ಮತ್ತು ನಾಯಕನ ಜೊತೆಗೆ ಬಚ್ಚಲುಮನೆಯಲ್ಲಿ ಅಂಡರವೇರ ಸನ್ನಿವೇಶಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ ಪ್ರೇಕ್ಷಕರು ತಾವು ಕುಳಿತ ಸೀಟುಗಳಲ್ಲಿಯೇ ಬಿದ್ದು ಬಿದ್ದು ನಗುವಂತೆ ಮಾಡುತ್ತವೆ.
ಪ್ರೇಕ್ಷಕರೊಂದಿಗೆ ನೇರವಾಗಿ ಮಾತನಾಡುವ ಮಂಜು ಗುಳೇದಗುಡ್ಡ ತಮ್ಮ ಸರಳ ಸುಂದರ ಅಭಿನಯದಿಂದ ನಾಟಕದ ಜೀವಾಳವಾಗಿದ್ದಾರೆ ನಾಟಕಕಾರ ಅಣ್ಣನ ಪಾತ್ರದಲ್ಲಿ ಮುನ್ನಾ ,ವ್ಯಾಪಾರಸ್ಥ ತಮ್ಮನ ಪಾತ್ರದಲ್ಲಿ ನಾಗರಾಜ ಅಣ್ಣನ ಪತ್ನಿ ಜಯಶ್ರೀ ಪಾತ್ರದಲ್ಲಿ ಪ್ರೇಮಾ ಗುಳೇದಗುಡ್ಡ ತಮ್ಮನ ಪತ್ನಿ ಜಯಶ್ರೀ ಪಾತ್ರದಲ್ಲಿ ನೀತಾ ಮೈಂದರಗಿ ವಿಲನ್ ಗಂಗಾಧರ ಪಾತ್ರದಲ್ಲಿ ರಾಜು, ಅನುಕೂಲ ಪಾತ್ರದಲ್ಲಿ ಮಂಜು ಗುಳೇದಗುಡ್ಡ ಸೂಚಿ ಪಾತ್ರದಲ್ಲಿ ಜ್ಯೋತಿ ಗುಳೇದಗುಡ್ಡ ಅವಳ ತಂದೆ ಕಂಠ್ಯಪ್ಪನ ಪಾತ್ರದಲ್ಲಿ ಗುರುಲಿಂಗಯ್ಯಸ್ವಾಮಿ ಸಹಜ ಅಭಿನಯ ನೀಡಿದ್ದಾರೆ ಅದರಲ್ಲೂ ಗುರುಲಿಂಗಯ್ಯಸ್ವಾಮಿ ತಮಗೆ ವಯಸ್ಸಾದರೂ ನೀಡಿರುವ ನಟನೆ ಹಾಡುವ ಹಾಡುಗಳು ಗಮನ ಸೆಳೆಯುತ್ತವೆ.
ಕ್ಯಾಸಿಯೋದಲ್ಲಿ ಮಹಾಂತೇಶ ಪ್ಯಾಡದಲ್ಲಿ ಭೀಮ ಮತ್ತು ರಂಗಸಜ್ಜಿಕೆಯಲ್ಲಿ ಮಂಜು ತಮ್ಮ ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಿದ್ದಾರೆ. ಮೂರು ಗಂಟೆಗಳ ಕಾಲ ಮನೋರಂಜನೆ ಪಡೆಯಲು ಚಂದುಳ್ಳ ಚೆಲುವಿ ಉತ್ತಮ ಅವಕಾಶವಾಗಿದೆ .