ಇಳಕಲ್ : ಇಲ್ಲಿನ ಮಲ್ಲಿಕಾರ್ಜುನ ನಾಟಕ ಸಂಘದ ರಂಗಮಂದಿರದಲ್ಲಿ ಲಿಂಗಾಪೂರ ಎಸ್ ಕೆದ ಪಂಚಲಿಂಗೇಶ್ವರ ನಾಟ್ಯ ಸಂಘದ ವತಿಯಿಂದ ನಾಟಕೋತ್ಸವ ಶನಿವಾರದಂದು ಯಶಸ್ವಿಯಾಗಿ ನಡೆಯಿತು.
ನಾಟಕೋತ್ಸವವನ್ನು ಉದ್ಘಾಟಿಸಿದ ಕಲ್ಲೂರ ನಾಟಕ ಸಂಘದ ಮಾಲಿಕ ಮಂಟೇಶ ದಂಡಿನ ಮಾತನಾಡಿ ಕಲಾವಿದರು ಬದುಕಲು ಸರಕಾರದ ಸಹಾಯಹಸ್ತ ಅವಶ್ಯವಾಗಿ ಬೇಕು ಈ ನಿಟ್ಟಿನಲ್ಲಿ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಕಲಾವಿದರಿಗೆ ಸಹಾಯ ಸಹಕಾರವನ್ನು ನೀಡುತ್ತಿದೆ ಎಂದು ಹೇಳಿದರು.ಅತಿಥಿಗಳಾಗಿ ಮುರ್ತುಜಸಾಬ ಚಳಗೇರಿ, ಮಾರುತಿ ಸಿಂಧೆ,ಮುಕುಂದಪ್ಪ ಗಡ್ಡದ, ಸುಭಾಶ ಸರೋದೆ ಆಗಮಿಸಿ ಮಾತನಾಡಿದರು
ಅಧ್ಯಕ್ಷತೆಯನ್ನು ಪತ್ರಕರ್ತ ಬಿ ಬಾಬು ವಹಿಸಿ ಮಾತನಾಡಿ ಬಡ ಪ್ರತಿಭಾವಂತ ಕಲಾವಿದರಿಗೆ ಮತ್ತು ನಾಟ್ಯ ಸಂಘಗಳಿಗೆ ಇಲಾಖೆ ಗುರುತಿಸಿ ಸಹಾಯಹಸ್ತ ನೀಡುತ್ತಿರುವದು ಅಭಿನಂದನಾರ್ಹ ಎಂದು ಹೇಳಿದರು.ಪಂಚಲಿಂಗೇಶ್ವರ ನಾಟ್ಯ ಸಂಘದ ಸಂಚಾಲಕ ಹನಮಂತಪ್ಪ ಬಾಗಲಕೋಟ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ದಾನೇಶ ಪಾಟೀಲ ವಂದಿಸಿದರು ಭರತರಾಜ ತಾಳಿಕೋಟಿ ನಿರೂಪಿಸಿದರು