Ilkal :- ಆಟಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ :- ಪ್ರಾಚಾರ್ಯ ಈ.ಸಾಯಿ ಕೃಷ್ಣ

 


ಇಳಕಲ್ :-  ಆಟಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರವನ್ನು ಆಡುತ್ತವೆ ಎಂದು ಎಸ್. ಎಸ್.ಕಡಪಟ್ಟಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಈ.ಸಾಯಿ ಕೃಷ್ಣ ಹೇಳಿದರು. ಅವರಿಂದು ಶಾಲೆಯಲ್ಲಿ ನ್ಯಾಷನಲ್ ಸ್ಪೋರ್ಟ್ಸ್ ದಿನದ ಅಂಗವಾಗಿ , ಮಾಂತ್ರಿಕ ಧ್ಯಾನ್ ಚಂದ್ ಅವರ ಜನ್ಮದಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ , ಮಕ್ಕಳು ಉತ್ತಮ ಆರೋಗ್ಯವನ್ನು ಹೊಂದಬೇಕು , ಶಾಲೆಯಲ್ಲಿ ನಡೆಯುತ್ತಿರುವ ಆಟೋಗಳಲ್ಲಿ ತಪ್ಪದೆ ಭಾಗವಹಿಸಬೇಕು ಎಂದು ಅವರು ಹೇಳಿದರು.ದೈಹಿಕ ಶಿಕ್ಷಕ ಪರಸಪ್ಪ ಕುರಿ ಧ್ಯಾನ ಚಂದ್ ಅವರ ಜನನ, ಬದುಕು, ಸಾಧನೆ ಕುರಿತು ಮಾತನಾಡುತ್ತಾ ಅವರು ದೇಶಕ್ಕೆ ಮೂರು ಬಂಗಾರದ ಪದಕಗಳನ್ನು ಒಲಂಪಿಕ್ ಕ್ರೀಡೆಗಳಲ್ಲಿ ತಂದುಕೊಟ್ಟ ಅವರು ನಿಜವಾಗಿಯೂ ಸಾಧಕರು ಎಂದರು . ಆರಂಭದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು . ಶಿಕ್ಷಕಿ ಶಂಕ್ರಮ್ಮ ಸ್ವಾಗತಿಸಿದರು , ವಿದ್ಯಾರ್ಥಿಗಳಾದ ಕುಶಾಲ್ ತೋಟಿಗೇರ , ಪ್ರತಿಕ್ಷಾ ಬಿ ಧ್ಯಾನ್ಚಂದ್ ಅವರ ಕುರಿತು ಮಾತನಾಡಿದರು . ಶಿಕ್ಷಕಿ ಸಲ್ಮಾ ಕಾರ್ಯಕ್ರಮ ನಿರೂಪಸುತ್ತಾ ವಂದಿಸಿದರು ... ಆರಂಭದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಪ್ರಾಚಾರ್ಯ ಈ ಸಾಯಿ ಕೃಷ್ಣ,ಶಿಕ್ಷಕಿ ಜ್ಯೋತಿ ಮರೋಳ , ದೈಹಿಕ ಶಿಕ್ಷಕರಾದ ಪರಸಪ್ಪ ಕುರಿ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು...

Post a Comment

Previous Post Next Post

Contact Form