Ilkal :- ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಗ್ರಾಮೀಣ ಕೂಟ ಕ್ರೆಡಿಟ್ ಅಕ್ಸಿಸ್ ಲಿಮಿಟೆಡ್ ಮುಂದಾಳತ್ವ

 


ಇಲಕಲ್ಲ: ಇಲಕಲ್ಲ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾಮೀಣ ಕೂಟ ಕ್ರೆಡಿಟ್ ಅಕ್ಸಿಸ್ ಲಿಮಿಟೆಡ್ ಶಾಖೆಯ ವತಿಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಇಲಕಲ್ಲ ಗ್ರಾಮೀಣ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ಎಸ್.ಆರ್ ನಾಯಕ, ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಉದಯಕುಮಾರ ದ್ಯಾಮಣ್ಣವರ ಹಾಗೂ ಕ್ರೆಡಿಟ್ ಅಕ್ಸಿಸ್ ವಿಜಯಪುರ ಪ್ರಾದೇಶಿಕ ವ್ಯವಸ್ಥಾಪಕ ರಾಮಕೃಷ್ಣರವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. 


ಕಾರ್ಯಾಗಾರದಲ್ಲಿ ಆರ್ಥಿಕ ಸಾಕ್ಷರತೆ, ಸಾಮಾಜಿಕ ಭದ್ರತಾ ಹಾಗೂ ಸೈಬರ್‌ ಕ್ರೈಂ ಕುರಿತು ಎಚ್ಚರಿಕೆ ಕ್ರಮಗಳ ಬಗ್ಗೆ ಜನರಿಗೆ ತಿಳಿಸಲಾಯಿತು.ಪಿಎಸ್‌ಐ ಎಸ್.ಆರ್ ನಾಯಕ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಕರೆ ಹೆಸರಿನಲ್ಲಿ ಬರುವ ಒಟಿಪಿ, ಕೆವೈಸಿ ಕೇಳುವ ಕರೆಗಳು ವಂಚಕರ ತಂತ್ರ. ಸಾರ್ವಜನಿಕರು ಇಂತಹ ಕರೆಗಳಿಗೆ ಸ್ಪಂದಿಸಬಾರದು. ಕಣ್ಣು ತಪ್ಪಿನಿಂದ ಮೋಸವಾದರೆ ಕೂಡಲೇ 1930ಗೆ ಕರೆಮಾಡಿ ಸೈಬರ್‌ ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾಲ ತೆಗೆದುಕೊಂಡಲ್ಲಿ ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆದ್ಯತೆ ಕೊಡಬೇಕು” ಎಂದು ಸಲಹೆ ನೀಡಿದರು.


ಎಸ್‌ಬಿಐ ಇಲಕಲ್ಲ ಶಾಖೆಯ ವ್ಯವಸ್ಥಾಪಕ ಉದಯಕುಮಾರ ದ್ಯಾಮಣ್ಣವರ ಹೇಳಿದರು, “ಗ್ರಾಹಕರು ತಮ್ಮ ಕ್ರೆಡಿಟ್‌ ಪ್ರಾಮಾಣಿಕವಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಾಲವನ್ನು ಸರಿಯಾದ ಸಮಯದಲ್ಲಿ ಪಾವತಿಸುವುದರಿಂದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ತಪ್ಪಿಸಬಹುದು. ನಮ್ಮ ಬ್ಯಾಂಕ್ ಹಾಗೂ ಕ್ರೆಡಿಟ್ ಅಕ್ಸಿಸ್ ಸಂಸ್ಥೆಗಳು ಗ್ರಾಹಕರಿಗೆ ಸಂಕಷ್ಟ ಸಮಯದಲ್ಲಿ ಸಾಲ ಸೌಲಭ್ಯ ಒದಗಿಸುತ್ತವೆ” ಎಂದರು.ಈ ಕಾರ್ಯಕ್ರಮದಲ್ಲಿ ರಿಸ್ಕ್ ಡಿಪಾರ್ಟ್ಮೆಂಟ್ ಚಾಂದಪಾಷಾ ರಗಟಿ ವಲಯ ವ್ಯವಸ್ಥಾಪಕರು ನಾಗಪ್ಪ ತಳವಾರ, ಎಚ್ ಆರ್ ತರಬೇತಿ ಡಿಪಾರ್ಟ್ಮೆಂಟ್ ಹನುಮೇಶ,ಬಿಎಸ್‌ಟಿ ಮಾಲತೇಶ, ಇಳಕಲ್ಲ ಗ್ರಾಮೀಣ ಕೂಟ ವ್ಯವಸ್ಥಾಪಕರಾದ ಪ್ರಶಾಂತ,ಜಯಪ್ಪ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



Post a Comment

Previous Post Next Post

Contact Form