ಬಾಗಲಕೋಟ :- ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕು ಮುತ್ತಗಾ ಗ್ರಾಮದಲ್ಲಿ"ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಪ್ರತಿಮೆಯ ಕೈಯನ್ನು ತುಂಡು ಮಾಡಿದ್ದು ಹಾಗೂ ಶರಣರ ಮುಖಕ್ಕೆ ಮಸಿಯನ್ನು ಬಳಿದಿರುವ ಕೆಲವು ಕಿಡಿಗೇಡಿಗಳು ಮಾಡಿದ್ದು, ನಮ್ಮ ಕುಲದ ಗುರುಗಳಿಗೆ ಅಪಮಾನ ಮಾಡಿದ್ದು ಸದರಿ ಕೃತ್ಯವನ್ನು ನಮ್ಮ ಸಮಾಜವು ತೀವ್ರವಾಗಿ ಖಂಡಿಸಿರುತ್ತದೆ. ಇಂತಹ ಹೀನಕೃತ್ಯವನ್ನು ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಉಗ್ರವಾದ ಕಾನೂನು ಕ್ರಮವನ್ನು ಕೈಗೊಳ್ಳಲು ಸರ್ಕಾರವು ತೆಗೆದುಕೊಳ್ಳಲು ನಿರ್ದೇಶನ ನೀಡಬೇಕೆಂದು ನೀಡಲಾಗಿರುತ್ತದೆ ಶ್ರೀ ಗಂಗಾಂಭಿಕಾ ಗಂಗಾಮತಸ್ಥರ ಅಂಬಿಗೇರ ಟೋಕರ ಕೋಳಿ ಸಮಾಜ ತರುಣ ಸಂಘ ಬಾಗಲಕೋಟೆ
ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿ ಆಡಳಿತ ಮಂಡಳಿ, ಅಖಿಲ ಭಾರತೀಯ ಕೋಳಿ ಸಮಾಜದ ಜಿಲ್ಲಾಧ್ಯಕ್ಷರು, ಬಾಗಲಕೋಟ ಜಿಲ್ಲಾ ಅಂಬಿಗರ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿ,ಮತ್ತು ರಾಜ್ಯಾಧ್ಯಕ್ಷರು ಸಮಾಜದ ಗುರುಹಿರಿಯರು, ಯುವಕರು ಈ ಮೂಲಕ ಮನವಿಯನ್ನು ನೀಡಲಾಗಿರುತ್ತದೆ


