ಇಳಕಲ್ : ಮುಖಮುಖಿ ಸಾಮಾಜಿಕ ಸ್ಪಂದನ ಸಂಸ್ಥೆ ಗೋರಬಾಳ್, ಯುಕ್ತ ಕೌಶಲ್ಯ ತರಬೇತಿ ಕೇಂದ್ರ

 


ಇಳಕಲ್ :- ಮುಖಮುಖಿ ಸಾಮಾಜಿಕ ಸ್ಪಂದನ ಸಂಸ್ಥೆ ಗೋರಬಾಳ್, ಯುಕ್ತ ಕೌಶಲ್ಯ ತರಬೇತಿ ಕೇಂದ್ರ ತುಮಕೂರು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಆಶಯದಲ್ಲಿ ಜರುಗಿದ ಕಳೆದ ಎರಡು ತಿಂಗಳಿಗೂ ಹೆಚ್ಚು ಅವಧಿಯಲ್ಲಿ ನಡೆದ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಈ ಕಾರ್ಯಕ್ರಮದ ಅಂಗವಾಗಿ ಪ್ರಶಸ್ತಿ ಪತ್ರ ನೀಡುವದರ ಮುಖಾಂತರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಳಕಲ್ ನಗರ ಶಹರ್ ಪೊಲೀಸ್ ಠಾಣಾ ಅಧಿಕಾರಿಗಳಾದ ಶ್ರೀ ಮಂಜುನಾಥ ಪಾಟೀಲ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸೈಬರ್ ಕ್ರೈಂ ಬಗ್ಗೆ ಹಾಗೂ ಜೀವನದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ವಿದ್ಯಾರ್ಥಿಗಳು ವಿವಿಧ ಕೌಶಲ್ಯ ತರಬೇತಿಗಳ ಬಗ್ಗೆ ಆಸಕ್ತಿ ವಹಿಸಿ ಅವುಗಳ ಮುಖಾಂತರ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ನಮ್ಮ ವೃತ್ತಿ ಜೀವನದ ಕುರಿತಾಗಿ ಗುರಿಯನ್ನು ಹೊಂದಬೇಕು. ಸೈಬರ್ ಅಪರಾಧ ಪ್ರಕರಣಗಳ ಕುರಿತು ಮಾತನಾಡುತ್ತಾ ವಾಹನ ಚಲಾಯಿಸುವವಾಗಲಿ, ಮೊಬೈಲ್ ನಲ್ಲಿ ಬರುವ ಸಂಖ್ಯಾಸ್ಪದ ಕರೆಗಳನ್ನು ಸ್ವೀಕರಿಸದೆ ಅಂತವುಗಳಿಂದ ದೂರ ಇರಬೇಕು. ನಿಮ್ಮ ವೈಯಕ್ತಿಕ ದಾಖಲಾತಿಗಳನ್ನು ಯಾವತ್ತೂ, ಯಾರೊಂದಿಗೂ ಹಂಚಿಕೊಳ್ಳಬೇಡಿ ಅನುಮಾನ ಬಂದರೆ ಸ್ಥಳೀಯ ಠಾಣೆಗೆ ದೂರು ನೀಡಿ ಅಥವಾ 1039 ಕರೆ ಮಾಡಿ ಎಂದು ಹೇಳಿದರು. 


ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆರಿಫ್ ಮೊಹಮ್ಮದ್. ಅವರು ಮಾತನಾಡಿ ಅಪರಾಧವೆಂದರೆ ನಮ್ಮ ವರ್ತನೆ ಮೇಲೆ ನಿಂತಿರುತ್ತದೆ. ಕಾನೂನನ್ನು ಉಲ್ಲಂಘನೆ ಮಾಡಿದರೆ ಅದು ಅಪರಾಧವಾಗುತ್ತದೆ. ಆದ್ದರಿಂದ ಅಪರಾಧ ಕೃತ್ಯಗಳಲ್ಲಿ ಎಂದೂ ಭಾಗವಹಿಸದೆ ಕಾನೂನಿಗೆ ಗೌರವ ಕೊಡಬೇಕು. ವೇದಿಕೆ ಮೇಲಿದ್ದ ಗಣ್ಯಮಾನ್ಯರು ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಹಾಂತೇಶ್ ಜೀವಣ್ಣವರ್, ಮುಖಾಮುಖಿ ಸಂಸ್ಥೆಯ ಖಜಾಂಚಿಯಾದ ಶ್ರೀ ವೆಂಕಟೇಶ್ ಬಂಡಿ, ಪ್ರಧಾನ ಕಾರ್ಯದರ್ಶಿಗಳಾದ ಶೇಕರಯ್ಯ ಹಿರೇಮಠ, ಸಂಚಾಲಕರ ಎಸ್ ಎಸ್ ಪಾಟೀಲ್, ಕಾಲೇಜಿನ ಎಲ್ಲ ಬೋಧಕ ಸಿಬ್ಬಂದಿ ವರ್ಗ , ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಶ್ರೀಮತಿ ಮಹಾದೇವಿ ಇಂಜನಗೇರಿ ಅವರು ನೆರವೇರಿಸಿದರು. ಶ್ರೀಮತಿ ಗಾಯತ್ರಿ ದಾದಮಿ ಅವರು ವಂದಿಸಿದ
ರು.

Post a Comment

Previous Post Next Post

Contact Form