ಇಳಕಲ್ : ನಾಳೆ ವಿಜೃಂಭಣೆಯಿಂದ ಜರಗಲಿರುವ ಇಳಕಲ್ ಶ್ರೀ ಶರಣಬಸವೇಶ್ವರ ಕಾರ್ತಿಕೋತ್ಸವ

 


ಇಳಕಲ್ :- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಜೆಸಿ ಸ್ಕೂಲ್ ಹತ್ತಿರ ಇರುವ ಶ್ರೀ ಶರಣಬಸವೇಶ್ವರ ದೇವಾಲಯದಲ್ಲಿ ನಾಳೆ 21/11/25ರಂದು ಶ್ರೀ ಶರಣಬಸವೇಶ್ವರ ಕಾರ್ತಿಕೋತ್ಸವವು ಭಕ್ತಿಭಾವದಿಂದ ವಿಜೃಂಭಣೆಯಿಂದ ಜರುಗಲಿದೆ.ಈ ಪವಿತ್ರ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ತರುಣ ಸಂಘದ ವತಿಯಿಂದ ಎಲ್ಲಾ ಭಕ್ತಾದಿಗಳು ಕಾರ್ತಿಕೋತ್ಸವದಲ್ಲಿ ಭಾಗವಹಿಸಲು, ಶ್ರೀ ಶರಣಬಸವೇಶ್ವರರ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ಪುನೀತರಾಗುವಂತೆ ವಿನಂತಿಸಲಾಗಿದೆ. 

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಸಂದೇಶವನ್ನು ಅಳವಡಿಸಿಕೊಂಡು ಆಚಾರ-ವಿಚಾರಗಳಲ್ಲಿ ಶ್ರೇಯೋಭಿವೃದ್ಧಿ ಸಾಧಿಸಬೇಕೆಂದು ಸಂಘದ ವತಿಯಿಂದ ಹೃತ್ಪೂರ್ವಕ ಮನವಿ ಮಾಡಲಾಗಿದೆ




Post a Comment

Previous Post Next Post

Contact Form