ಇಳಕಲ್: ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಜನಪ್ರಿಯ ಶಾಸಕ ಡಾ. ವಿಜಯಾನಂದ ಎಸ್ ಕಾಶಪ್ಪನವರ್ ಅವರ ನಿವಾಸದಲ್ಲಿ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎಚ್ ವೈ ಮೇಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಥ ಹಾಗೂ ಮೌನಾಚರಣೆ ನಡೆದಿದ್ದು, ಈ ಸಂದರ್ಭದಲ್ಲಿ ವಿವಿಧ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆ ಅಧ್ಯಕ್ಷ ಮಹಾಂತೇಶ ಹನುಮನಾಳ, ಟಿಪ್ಪು ಭಂಡಾರಿ, ಶಬ್ಬೀರ್ ಭಗವಾನ್, ವೀರೇಶ್ ನಾಲವಾಡದ, ಪ್ರವೀಣ್ ಹೋಳಿ, ಮಲ್ಲೇಶ್ ಮುದುಗಲ್, ಏನ್ ಎಂ ಖಾದ್ರಿ, ಬಾಬುಸಾಬ್ ಶಿವನಗುತ್ತಿ, ಕೃಷ್ಣ ಕಾಂಬಳೆ, ಸುಮಿತ್ರಾ ಬಾಯ್ ರಜಪೂತ್, ಕಲ್ಪನಾ ಗಜೇಂದ್ರಗಡ, ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ್ ಸಪ್ಪರದ ಮತ್ತು ಉಪಾಧ್ಯಕ್ಷ ಅಹಮದ್ ಭಾಗವಾನ್ ಕಂಡಕ್ಟರ್ ಸೇರಿದಂತೆ ಅನೇಕರ ಭಾಗವಹಿಸಿದ್ದರು




