Ilkal : ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಠ್ಯಪುಸ್ತಕ ವಿತರಣೆ

 

2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಅಂಗವಾಗಿ,ಇಲಾಖೆಯಿಂದ ಸರಬರಾಜು ಆಗಿರುವ ಪಠ್ಯ ಪುಸ್ತಕಗಳನ್ನು ಇಳಕಲ್ ವಲಯದ ಶಾಲೆಗಳ ಮುಖ್ಯಗುರುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜಾಸ್ಮಿನ ಕಿಲ್ಲೆದಾರ ರವರು ಸದರಿ ಸಾಲಿನ ಉತ್ತಮ ಕಲಿಕೆ ;ಉಜ್ವಲ ಭವಿಷ್ಯ ದ್ಯೇಯ ವಾಕ್ಯದೊಂದಿಗೆ ಪಠ್ಯ ಪುಸ್ತಕಗಳನ್ನು ಶಾಲೆ ಪ್ರಾರಂಭ ಪೂರ್ವದಲ್ಲಿಯೇ ತಾಲೂಕಿನ ಎಲ್ಲಾ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ.ಹಾಗೂ ಸದರಿ ಸಾಲಿನಿಂದ ಕನ್ನಡ ಮತ್ತು ಇಂಗ್ಲಿಷ್ ದ್ವಿ ಭಾಷಾ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದ್ದು ರಾಜ್ಯದ 15 ಜಿಲ್ಲೆಗಳ ಪೈಕಿ ನಮ್ಮ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ದ್ವಿ ಭಾಷಾ ಮಾಧ್ಯಮ ಪ್ರಾರಂಭವಾಗುತ್ತಿದ್ದೂ, ಎಲ್ಲಾ ಪಾಲಕರು ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಲ್ಲೂ ವಿನಂತಿಸಿದರು.



ತಾಲೂಕಿನಲ್ಲಿ 54 ಶಾಲೆಗಳಲ್ಲಿ LKG ತರಗತಿಗಳು ಪ್ರಾರಂಭ ಆಗುತ್ತಿದ್ದು;ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲು ಮಾಡಿಕೊಳ್ಳಲು ವಿನಂತಿಸಿದರು.

ಇದೆ ಸಂದರ್ಭದಲ್ಲಿ ವಿಕಲಚೇತನ ಕುಂದುಕೊರತೆ ಸಭೆಯಲ್ಲಿ ತಾಲೂಕಿನ ದಂಡಾಧಿಕಾರಿಗಳು, ತಹಶೀಲ್ದಾರ್ ರಾದ ಅಮರೇಶ ಪಮ್ಮಾರ ರವರು ಸಹ ಮಾತನಾಡುತ್ತ ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿದ್ದೂ ಪಾಲಕರು ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದರು.

ತಾಲೂಕಿನಾದ್ಯಂತ ಶಿಕ್ಷಕರು ಮನೆಮನೆಗೆ ತೆರಳಿ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದೂ, ಪಾಲಕರು ಸಹಕರಿಸಲು ವಿನಂತಿಸಿದರು.



ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸದಾಶಿವ ಗುಡಗುಂಟಿ, ವಿನೋದ ಭೋವಿ ರವರು, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ,ಕಾರ್ಯದರ್ಶಿಗಳಾದ ಸಂಗಮೇಶ ಬಂಗಾರಿ ಹಾಗೂ ತಾಲೂಕಿನ ಮುಖ್ಯ ಗುರುಗಳು, ಶಿಕ್ಷಕರು ಉಪಸ್ಥಿತರಿದ್ದರು


Post a Comment

Previous Post Next Post

Contact Form