ಇಳಕಲ್ : ಇಲ್ಲಿನ ಅಂಜುಮನ್ ಸಂಸ್ಥೆಯ ಎಸ್ ಎಂ ಎಸ್ ಖಾದ್ರಿ ಹೈಸ್ಕೂಲಿನ ೨೦೦೩ ರ ಬ್ಯಾಚಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತಾವು ಕಲಿತ ಶಾಲೆಯ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಋಣ ತೀರಿಸಿದರು .
ಮುಖ್ಯ ಅತಿಥಿಗಳಾಗಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್ , ಅಂಜುಮನ್ ಹೈಸ್ಕೂಲ್ ಚೆರ್ಮನ್ ಮೋದಿನಭಾಷಾ ಹುಣಚಗಿ ಆಗಮಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಕನಸನ್ನು ಕಾಣುತ್ತಿರುತ್ತಾರೆ ಇಲ್ಲಿ ೨೨ ವರ್ಷಗಳ ಹಿಂದೆ ಕಲಿತು ಹೋದ ವಿದ್ಯಾರ್ಥಿಗಳು ಕೂಡಿಕೊಂಡು ತಮ್ಮ ಗುರುಗಳಿಗೆ ಅಭಿನಂದಿಸಿರುವದು ಒಂದು ಸಾರ್ಥಕ ಕಾರ್ಯ ಎಂದು ಬಣ್ಣಿಸಿದರು.
ಕಲಿಸಿದ ಗುರುಗಳಾದ ಮೆಹಬೂಬ್ಆಲಂ ಬಡಗನ್, ಅಮಿರ್ ಹಮಜಾ ಮಾಸಾಪತಿ,ಅಬ್ದುಲ್ ರೆಹಮಾನ್ ತಾವರಗೇರಿ, ಅಬ್ದುಲ್ ಕರೀಂ ಬಡಗನ್, ಅನ್ವರ ಹುಸೇನ್ ಗಡಾದ, ಪರವೀನಬಾನು ಪಠಾಣ, ರಿಹಾನಾ ಹುಮ್ನಾಬಾದ್, ಖಾದರಭಾಷಾ ಚವಡಿ, ಮಹಮ್ಮದ್ ಗೌಸ್ ಮುಜಾವರ ಇವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು
ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಮುಖ್ಯಗುರು ಮಹಮ್ಮದ್ ಅಲಿ ಯತ್ನಟ್ಟಿ ಮಾತನಾಡಿ ಇಷ್ಟೊಂದು ವರ್ಷಗಳಾದ ಮೇಲೆ ನಮ್ಮನ್ನೆಲ್ಲಾ ನೆನಪಿಟ್ಟುಕೊಂಡು ಎಲ್ಲರೂ ಸೇರಿ ಇಲ್ಲಿಗೆ ಬಂದು ನಿಮ್ಮ ಪ್ರೀತಿ ವಿಶ್ವಾಸ ಹಂಚಿರುವದು ನಮಗೆಲ್ಲಾ ಖುಷಿ ತಂದಿದೆ ಎಂದು ಹೇಳಿದರು.
೨೦೦೩ ರ ಬ್ಯಾಚಿನ ವಿದ್ಯಾರ್ಥಿಗಳು ಭಾಗವಹಿಸಿ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಗುರುವಂದನೆ ಸಲ್ಲಿಸಿದರು.
ವರದಿ :- ನಬಿ ಹುಣಚಗಿ