ಹುನಗುಂದ : ತಾಲೂಕಿನ ಸೂಳೇಭಾವಿ ಗ್ರಾಮದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸ್ವಾಮಿ ವಿವೇಕಾನಂದ ಕಲಾ,ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ಕಾಲೇಜು ಸಂಸತ್ತು ಚುನಾವಣೆಯನ್ನ ನಡೆಸಲಾಯಿತು.
ಈ ಚುನಾವಣೆಯಲ್ಲಿ ವರ್ಗಪ್ರತಿನಿಧಿ, ಸಾಂಸ್ಕೃತಿಕ ವಿಭಾಗ,ಕ್ರೀಡಾವಿಭಾಗ,ಪರೀಕ್ಷಾ ವಿಭಾಗ,ಪ್ರವಾಸ ವಿಭಾಗ,ಶಿಸ್ತು ಮತ್ತು ಸ್ವಚ್ಛತಾ ವಿಭಾಗ,
ಚರ್ಚಾವಿಭಾಗ,ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗ, ಒಟ್ಟು 8 ಸ್ಥಾನಗಳಿಗೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಚುನಾವಣೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಚಾರ್ಯರು,ಉಪನ್ಯಾಸಕರು ಪಾಲ್ಗೊಂಡು ಚುನಾವಣಾ ಅಭ್ಯರ್ಥಿಗಳಿಗೆ ಮತವನ್ನ ಹಾಕುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.
ಚುನಾವಣೆ ಫಲಿತಾಂಶದಲ್ಲಿ 14 ಜನ ವಿದ್ಯಾರ್ಥಿ/ನಿಯರು ಪ್ರಚಂಡ ಬಹುಮತದಿಂದ ಆಯ್ಕೆಗೊಂಡಿದ್ದಾರೆ.
ಆಯ್ಕೆ ಗೊಂಡ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯರಾದ ಮಹದೇವ ಮೇಳಿ,ಹಾಗೂ ಉಪನ್ಯಾಸಕರಾದ ಶರೀಫ,ಬಸವರಾಜ,ವೆಂಕಟೇಶ,ಮಹಾಂತೇಶ, ಯಮನೂರ ಹಾಗೂ ಆಡಳಿತ ಮಂಡಳಿಯವರು ಶುಭಾಶಯಗಳನ್ನು ಕೋರಿದರು.