ಕದಗಲ್ಲ : ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ನಿರಂತರ ನೆಡೆಯುತ್ತಿರುವ ಮಹಾತ್ಮರ ಜೀವನ ದರ್ಶನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಬೆಳಗಾವಿ ಜಿಲ್ಲೆಯ ಶ್ರೀ ಕೆಂಪಯ್ಯಸ್ವಾಮಿ ಮಠದ ಮ ನಿ ಪ್ರ ಡಾ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಂದಗಲ್ಲ ಗ್ರಾಮವು ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದ್ದು ಇಲ್ಲಿ ಭಕ್ತಿ, ಶ್ರದ್ದೆ,ಕಲೆ,ಸಾಹಿತ್ಯ, ಧರ್ಮ, ಒಳಗೊಂಡು ಪ್ರತಿಯೊಂದು ಕೂಡಾ ಬಹಳ ಸಮತೋಲನದಿಂದ ಕೂಡಿದ್ದು ನಮಗೆ ಬಹಳ ಸಂತಸ ತಂದಿದ್ದು ಇಲ್ಲಿನ ಸುವರ್ಣಗಿರಿ ರುದ್ರುಸ್ವಾಮಿ ಮಠದ ಡಾ ಚನ್ನಮಲ್ಲ ಮಹಾಸ್ವಾಮಿಗಳು ಪಂಡಿತರು, ಕವಿಗಳು, ಖ್ಯಾತ ವ್ಯಾಗ್ಮಿಗಳು, ಸಾಹಿತ್ತ್ಯಾಭಿಮಾನಿಗಳು, ಭಕ್ತರ ಏಳಿಗೆಗಾಗಿ ಹಗಲಿರುಳು ಶ್ರಮಿಸುವ ಶ್ರೀಗಳನ್ನು ಪಡೆದ ನೀವೇ ಭಾಗ್ಯವಂತರು ಶ್ರೀಗಳ ಪುಣ್ಯ ಕಾರ್ಯಗಳಿಂದ ನಿಮ್ಮ ಕಂದಗಲ್ಲ ಗ್ರಾಮ ಕರ್ನಾಟಕ ರಾಜ್ಯವಲ್ಲದೆ ಭಾರತ್ ದೇಶಾದ್ಯಂತ ತನ್ನ ಕೀರ್ತಿಯನ್ನು ಹೆಚ್ಚಸಲಿದೆ ಎಂದರು.
ಮ ನಿ ಪ್ರ ಶಿವಬಸವ ಮಹಾಸ್ವಾಮಿಗಳು ವಿರಕ್ತಮಠ ಹುಕ್ಕೇರಿ ಶ್ರೀಗಳು ಕಾರ್ಯಕ್ರಮ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ಕಂದಗಲ್ಲ ಸುವರ್ಣಗಿರಿ ಶ್ರೀ ರುದ್ರುಸ್ವಾಮಿ ಮಠದ ಡಾ ಚನ್ನಮಲ್ಲ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರಾಢಶಾಲೆ ಇನಾo ಕಡಿವಾಲದ ಉಪನ್ಯಾಸಕರಾದ ಶ್ರೀ ಮತಿ ಡಾ ಶಿವಗಂಗಾ ರಂಜನಗಿ ವಿಶೇಷ ಉಪನ್ಯಾಸ ನೀಡಿದರು.
ಮಹಾಂತೇಶ್ ಕಡಿವಾಲ ಸ್ವಾಗತಿಸಿದರು. ಸಂಗೀತಗಾರರಾದ ಮಹಾಂತೇಶ್ ಚುರ್ಚಿಹಾಳ್ ಹಾಗೂ ಪ್ರತಾಪಕುಮಾರ ಹಿರೇಮಠ ಪ್ರಾರ್ಥನೆ ಮಾಡಿದರು. ಶ್ರೀ ಮತಿ ಕವಿತಾ ಹವಾಲ್ದಾರಮಠ ವಂದಿಸಿದರು. ಗುರುಗಳಾದ ದೊಡ್ಡಬಸು ಮಲ್ಲಾಪುರ ಮತ್ತು ಪಂಪಯ್ಯ್ ಗುರುವಿನಮಠ ಕಾರ್ಯಕ್ರಮ ನಿರೂಪಿಸಿದರು
ಮಹಿಳೆಯರು ಮಕ್ಕಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.