ಶ್ರೀ ವಿಜಯ ಮಹಾಂತೇಶ ಹೈಸ್ಕೂಲಿನ 1977 - 78 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಇದೆ ದಿನಾಂಕ ಸೆಪ್ಟೆಂಬರ್ 6 ಮತ್ತು 7ರಂದು ಗುರುವಂದನಾ ಕಾರ್ಯಕ್ರಮ

 


ಹುನಗುಂದ : ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವಂತಹ ವಿಜಯ ಮಹಾಂತೇಶ ಹೈಸ್ಕೂಲಿನ 1977 - 78 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್. ಸಿ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ನಡೆಸಬೇಕೆಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ಸ್ನೇಹಿತರ ಬಳಗ ಒಪ್ಪಿಕೊಂಡಿದೆ. ಶ್ರೀ ಮಹಾಂತೇಶ ರೇವಡಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು .ಈ ಹಿಂದೆ ನಿರ್ಧಾರಪಡಿಸಿದಂತೆ 2025 ಸಪ್ಟಂಬರ್ 6 ಹಾಗೂ 7 ರಂದು ಎರಡು ದಿನಗಳ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಹಾಂತೇಶ ರೇವಡಿ ತಿಳಿಸಿದರು .ಸಪ್ಟೆಂಬರ್ 6 ರಂದು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದಲ್ಲಿ ಬಂಗಾರದ ದಿನಗಳ ನೆನಪಿನ ಹಬ್ಬ ನಡೆಯಲಿದ್ದು , ದಿನಾಂಕ 6 ರಂದು ಅಲ್ಲಿ ಬಂಗಾರದ ದಿನಗಳ ನೆನಪಿನ ಹಬ್ಬವನ್ನು ಉದ್ಘಾಟನೆ ಮಾಡಲಾಗುವುದು . 47 ವರ್ಷಗಳ ನಂತರ ಸೇರಿದ್ದ ಎಲ್ಲಾ ಸ್ನೇಹಿತರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವರು ಹಾಗೂ ಇಡೀ ದಿನ ನಡೆಯುವ ಈ ಒಂದು ಕಾರ್ಯಕ್ರಮದಲ್ಲಿ ಸುಮಾರು ನೂರು ಜನ ಸ್ನೇಹಿತರು ಭಾಗವಹಿಸುವರು ಎಂದು ಅವರು ತಿಳಿಸಿದರು . ದಿನಾಂಕ 7 ರಂದು ಹುನಗುಂದದ ವಿಜಯ ಮಹಾಂತೇಶ ಹೈಸ್ಕೂಲಿನ ಸಭಾಭವನದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯುತ್ತದೆ. ನಮಗೆ ಪಾಠ ಮಾಡಿದ ಶ್ರೀ ಎಸ್. ಎ. ಬಡಿಗೇರ , ಶ್ರೀ ಎಂ.ಎನ್. ತೆನಿಹಳ್ಳಿ , ಶ್ರೀ ವಿ.ವಿ.ಪತ್ತಾರ , ಶ್ರೀ ಎಸ್.ಎಸ್. ದರಗದ , ಶ್ರೀ ಎಸ್. ಎನ್.ಹೂಗಾರ ಹಾಗೂ ಶ್ರೀ ಬಿ.ಸಿ.ಪಾಟೀಲ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಮಠದ ಶ್ರೀ ಮ.ನಿ.ಪ್ರ ಗುರುಮಂಹಾತ ಸ್ವಾಮಿಗಳು ಸಾನಿಧ್ಯವಹಿಸುವರು . ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ವೀರಣ್ಣ ಚರಂತಿಮಠ , ಗೌರವ ಕಾರ್ಯದರ್ಶಿಗಳಾದ ಡಾ. ಮಹಾಂತೇಶ್ ಎಸ್.ಕಡಪಟ್ಟಿ ಉಪಸ್ಥಿತರಿರುವರು ಎಂದು ಅವರು ತಿಳಿಸಿದ್ದಾರೆ . ಈ ಕಾರ್ಯಕ್ರಮದ ವ್ಯವಸ್ಥೆಗೆ ಸ್ಥಳೀಯ ಸಮಿತಿಯೊಂದನ್ನು ನೇಮಕ ಮಾಡಿಕೊಂಡಿದ್ದು ಶ್ರೀ ಮಹಾಂತೇಶ ರೇವಡಿ ಅಧ್ಯಕ್ಷರಾಗಿ, ಶ್ರೀ ಎಂ ಬಿ. ದೇವರಡ್ಡಿ ಹಾಗೂ ಶ್ರೀ ಸಂಗು ಮಠ ಕಾರ್ಯದರ್ಶಿಗಳಾಗಿ ಹಾಗೂ ಖಜಾಂಚಿಯಾಗಿ ಶ್ರೀ ಹುಚ್ಚೇಶ ಕಾಳಸ್ತಿಮಠ ಕಾರ್ಯನಿರ್ವಹಿಸುವರು ಎಂದು ಅವರು ತಿಳಿಸಿದ್ದಾರೆ . 

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಹಲವಾರು ಸಮಿತಿಗಳನ್ನು ನೇಮಕ ಮಾಡಲಾಗಿದೆ . ಸ್ವಾಗತ ಸಮಿತಿ , ವೇದಿಕೆ ನಿರ್ಮಾಣ ಸಮಿತಿ , ಆಹಾರ ಸಮಿತಿ , ಹಣಕಾಸು ಸಮಿತಿ , ಪ್ರಚಾರ ಸಮಿತಿ , ಮನರಂಜನ ಸಮಿತಿ , ಆತಿಥ್ಯ ಸಮಿತಿ ಹೀಗೆ ಹಲವಾರು ಸಮಿತಿಗಳನ್ನು ರಚಿಸಲಾಗಿದೆ.... ಸುಮಾರು 50 ವರ್ಷಗಳ ನಂತರ ಸೇರುವ ಎಲ್ಲಾ ಸ್ನೇಹಿತರು ಇದೊಂದು ವಿಶಿಷ್ಟ ಪೂರ್ಣವಾಗಿ , ಅರ್ಥಪೂರ್ಣವಾದ ಕಾರ್ಯಕ್ರಮವಾಗಬೇಕೆಂದು ಆಶಯ ಪಟ್ಟಿದ್ದಾರೆ 


Post a Comment

Previous Post Next Post

Contact Form