ರಸ್ತೆ ಅತಿಕ್ರಮಣ ಮಾಡಿ ದಾರಿಯಲ್ಲೇ ಅಂಗಡಿಗಳನ್ನು ಹಾಕಿದರು ಹೇಳೋರು ಕೇಳೋರು ಇಲ್ಲದಂತಾಗಿದೆ ಮಾನ್ಯ ಜಿಲ್ಲಾಧಿಕಾರಿಗಳೇ ಇತ್ತ ಗಮನ ಹರಿಸುವರೇ.. ??
ಇಳಕಲ್ :-ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ರಸ್ತೆ ಯುದ್ದಕ್ಕೂ ಬಂಡಿ, ಅಂಗಡಿಗಳು ತಳ್ಳುಗಾಡಿಗಳು ವಾಹನಗಳು ಬೈಕ್ ಗಳು ಎಲ್ಲೆಂದರಲ್ಲಿ ನಿಂತರು ಹಲವು ಅಪಘಾತಗಳು ಜರುಗಿದರು ಕಂಡು ಕಾಣದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕಣ್ಣು ಬಾಯಿ ಕಿವಿಗಳನ್ನು ಮುಂಚಿಕೊಂಡು ಹಾಯಾಗಿ ಕುಳಿತು ಬಿಟ್ಟಿದ್ದಾರೆ ಹಲವು ಜನರು ಈ ಕುರಿತು ನಗರಸಭೆಗೆ ಮನವಿಗಳನ್ನು ನೀಡಿದರು ಕ್ಯಾರೆ ಎನದೆ ಬೀದಿ ಅಂಗಡಿಗಳು ಬೇರೆ ಅವರಿಂದ ಹಫ್ತಾ ವಸೂಲಿ ಮಾಡಿಕೊಳ್ಳುವವರು ಆಗಿರುವದರಿಂದ ಅಧಿಕಾರಿಗಳ ಗಳಿಗೂಅದರ ರುಚಿ ದೊರೆಯುತ್ತಿರುವುದರಿಂದ ಏನು ಮಾಡದೇ ಅಸಹಾಯಕರಾಗಿದ್ದಾರೆ, ಅಡ್ಡಾದಿಡ್ಡಿ ವಾಹನಗಳ ಚಾಲನೆ ಪ್ರಮುಖ ರಸ್ತೆಗಳ ಮೇಲೆ ಅಡ್ಡದಾರಿಯಲ್ಲಿ ವಾಹನಗಳು ನಿಲ್ಲಿಸಿ ತಮ್ಮ ವ್ಯಾಪಾರ ವಹಿವಾಟಿಗೆ ತೆರಳುತ್ತಾರೆ ಆಗ ಸಾಕಷ್ಟು ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುತ್ತದೆ. ಸಾಕಷ್ಟು ಒತ್ತಡಗಳು ಬಂದಾಗ ಒಂದಿಬ್ಬರು ಪೊಲೀಸರು ಮಾತ್ರ ಕಂಠಿ ಸರ್ಕಲ್ ನಲ್ಲಿ ವಾಹನ ನೀಲದಂತೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಕಂಠಿ ವೃತ್ತದಲ್ಲಿ ನಗರಸಭೆಯ ವಾಣಿಜ್ಯ ಸಂಕೀರ್ಣಗಳ ಮುಂದೆ ಯಾವ ಮಳಿಗೆಗಳು ಕಾಣದಂತೆ ಹಲವಾರು ಎಗ್ಗ ರೈಸ್ ಅಂಗಡಿಗಳು ಹಾಕಿದ್ದಾರೆ ಅವುಗಳ ಬಾಡಿಗೆಯನ್ನು ಬೇರೆಯವರು ತೆಗೆದುಕೊಳ್ಳುತ್ತಾರೆ ಇದರಿಂದ ಪಾದಚಾರಿಗಳಿಗೆ ತಿರುಗಾಡುವ ರಸ್ತೆ ಸಂಪೂರ್ಣ ಬಂದಾಗಿದೆ ಈ ಕುರಿತು ವಾಣಿಜ್ಯ ಮಳಿಗೆಗಳ ಮಾಲೀಕರು ಸಾಕಷ್ಟು ನಗರ ಸಭೆಗೆ ತಿಳಿಸಿದರು ಕ್ಯಾರೇ ಎನ್ನುತ್ತಿಲ್ಲ ಈ ಕುರಿತು ಪಾದಚಾರಿಗಳಿಗೆ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲು ಆಗ್ರಹಿಸಿದ್ದಾರೆ.ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು, ಇಳಕಲ್ ನಗರ ಬೃಹತ್ ಆಗಿ ಬೆಳೆಯುತ್ತಿದ್ದರೆ ಸುಗಮ ಸಂಚಾರ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

