ಇಳಕಲ್ : ಮರಟಗೇರಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ, ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆ ಇಳಕಲ್, ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರ ಇಲಕಲ್ ಇವರ ಸಯುಕ್ತ ಆಶ್ರಯದಲ್ಲಿ ಕೌಟುಂಬಿಕ ದೌರ್ಜನ್ಯ,ಬಾಲ್ಯ ವಿವಾಹ ತಡೆಯುವುದು, ಗಂಡಾಂತರ ಗರ್ಭಿಣಿಯರ ಆರೋಗ್ಯದ ಕುರಿತು, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಾಸ್ತವಿಕ ನುಡಿ ಆಶಾದೀಪ ಸಂಸ್ಥೆಯ ನಿರ್ದೇಶಕರಾದ ಸುನಿಲ್ ಬಾಲಗಾವಿ ಅವರು ಆಶಾದೀಪ ಸಂಸ್ಥೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಕೌಟಿಂಬಿಕ ಸಲಹೆಗಾರ್ತಿಯರಾದ ಶ್ರೀಮತಿ ಭಾಗ್ಯಶ್ರೀ ಜಮ್ಮನಕಟ್ಟಿ ಗಂಡಾಂತರ ಗರ್ಭಿಣಿಯರ ಆರೋಗ್ಯದ ಬಗ್ಗೆ, ಕೌಟುಂಬಿಕ ದೌರ್ಜನದ ಬಗ್ಗೆ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವ ಬಗ್ಗೆ ಜಾಗೃತಿ ಮೂಡಿಸಿದರು.
ಮಹಿಳಾ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತರಾದ ಕುಮಾರಿ ಸಾವಿತ್ರಿ ಆಚಾರ್ಯ ಬಾಲ್ಯ ವಿವಾಹ ನಿಷೇಧ ಹಾಗೂ ಅದರಿಂದಾಗುವ ಪರಿಣಾಮದ ಬಗ್ಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕ್ರಪ್ಪ ಮೆದಿಕಿನಾಳ ರವರು ಗರ್ಭಿಣಿಯರ ಆರೋಗ್ಯದ ಬಗ್ಗೆ ಹಾಗೂ ಮಹಿಳಾ ಸಾಂತ್ವನದಲ್ಲಿ ಸಾಂತ್ವನದ ಬಗ್ಗೆ ಮಾತನಾಡಿದರು
ಅಂಗನವಾಡಿ ಟೀಚರ್ ಆದ ಶ್ರೀಮತಿ ಗಂಗಮ್ಮ ಶಿವಪ್ಪ ಹವಾಲ್ದಾರ್ ಇವರು ಮನೆಯಲ್ಲಿ ಹೆರಿಗೆ ಆಗುವುದನ್ನು ತಡೆಗಟ್ಟುದರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಮಂಜಪ್ಪ ವಡ್ಡರ್, ಗ್ರಾ.ಪಂ. ಉಪಾಧ್ಯಕ್ಷರಾದ ಶಿವಮ್ಮ ಸಿದ್ದಪ್ಪ ಪೂಜಾರ್, ಅಂಗನವಾಡಿ ಟೀಚರ್ ಶ್ರೀಮತಿ ರೇಣುಕಾ ರುದ್ರಪ್ಪ ವಿಠಲಪುರ್.ಊರಿನ ಹಿರಿಯರಾದ ಹೇಮಪ್ಪ ಶಿವಪ್ಪ ಹವಾಲ್ದಾರ್, ಹಾನಪ್ಪ ಪೂಜಾರ್ ಆ ಊರಿನ ಜನರು ಭಾಗವಹಿಸಿದ್ದರು.



